Monday 29 February 2016

Bengal Fox

ನರಿ ಮುಖ ನೋಡಿ ಬಂದ್ರೆ ಒಳ್ಳೆದಾಗುತ್ತೆ ಅಂತ ಯಾರಾದ್ರು ಕೇಳಿದ್ರ? ಈಗ ನರಿ ನೋಡೋದೇ ಜಾಕ್ಪಾಟ್ !
Bengal or Indian Fox, Feb 2016


Sunday 21 February 2016

Peregrine Falcon (ದೊಡ್ಡ ಚಾಣ), Feb 2016

ಚಳಿಗಾಲ, ಬೆಳಿಗ್ಗೆ ಹಾಸಿಗೆಯಿಂದ ಏಳಬೇಕಾದರೆ ಗಡಿಯಾರದೊಂದಿಗೆ ಮಹಾಯುದ್ಧವೇ ನಡೆದುಬಿಡುತ್ತದೆ. ಹಾಗೂ ಹೀಗೂ ಕಷ್ಟಪಟ್ಟು ಗಡಿಯಾರ, ನಿನಗೇ ಜೈ ಸೋಲೊಪ್ಪಿಕೊಂಡದ್ದಾಯಿತೆಂದು ಕಣ್ಣು ತೆರೆದರೆ, ರೆಪ್ಪೆಯೊಳಗೆ ಮರಳುಹಾಕಿ ತಿಕ್ಕಿದಂತೆ ಹಿಂಸೆ. ಸರಿ, ಸಾಹಸ ಮಾಡಿ ಕಣ್ಣು ತೆರಿದದ್ದಾಯಿತೆನ್ನುವಷ್ಟರಲ್ಲಿ ಇನ್ನೊಂದು ಭೀಕರ ಸಮಸ್ಯೆ! ಕಾಲಿಗೆ ದೊಡ್ಡದೊಂದು ಕಬ್ಬಿಣದ ಗುಂಡು ಕಟ್ಟಿಕೊಂಡಂತೆ, ಎದ್ದು ನಡೆಯಲಸಾಧ್ಯ.... ನಮಗಿಂತ ಮುಂಚೆ ಇಲ್ಲಿ ಸೋಂಬೇರಿತನ ಎದ್ದು ತಾಂಡವವೇ ಆಡಿಬೆಟ್ಟಿರುತ್ತದೆ. ಈ ಸೋಮಾರಿತನದ ಪರಮಾವಧಿಯಿಂದ ಹೊರ ಬರುವುದು ಸುಲಭದ ಮಾತಲ್ಲ ಬಿಡಿ.

ಪಕ್ಷಿವೀಕ್ಷಣೆಯಂಥ ಹವ್ಯಾಸ ರೂಢಿಸಿಕೊಂಡರೆ, ಪ್ರಕೃತಿಯಲ್ಲಿನ ಕುತೂಹಲ ತಿಳಿಯುವ ಕಾತುರದಲ್ಲಿ ಚಳಿ, ಮಳೆ, ಗಾಳಿಗಳ್ಯಾವೂ ಲೆಕ್ಕಕ್ಕೆ ಬರೊಲ್ಲ!

ಪ್ರಕೃತಿ ನೋಡಲು ಬೆಳಗ್ಗಿನ ಜಾವ ಪ್ರಶಸ್ಥ ! ಮಕ್ಕಳಿಗೆ ಈ ರೀತಿ ಯಾವುದಾದರೊಂದು ಹುಚ್ಚು ಹಿಡಿಸಿನೋಡಿ. ತಂತಾನೆ ಉತ್ತಮ ಆರೋಗ್ಯ ಹಾಗು ಶಿಸ್ಥಿನ ಜೀವನರೂಪುಗೊಂಡರೆ ಆಶ್ಛರ್ಯವೇನಿಲ್ಲ, ಯೋಚನೆಮಾಡುವ ದಿಕ್ಕು ದೆಶೆ ಬದಲಾಗಿ ಉನ್ನತಮಟ್ಟದಲ್ಲಿ ಯೋಚಿಸುವ ಸಾಮರ್ಥ್ಯ ಬೆಳೆಸುವ ಅವಕಾಶ ದೊರೆಯುತ್ತದೆ. ಎಲ್ಲರಲ್ಲೊಬ್ಬರಾಗಿ ಉಳಿಯದೆ ತಮ್ಮದೇ ಆದ ಸಾಧನೆಯ ಮಾರ್ಗ ಕಾಣಬಹುದು - ಇದೇ ಹವ್ಯಾಸಗಳಿಂದ ದೊರೆಯುವ ಲಾಭಗಳು.

ಅದಿರಲಿ, ಪ್ರಕೃತಿಯಲ್ಲಿ ಎಣಿಕೆಗೆ ಸಿಗದಷ್ಟು ಕುತೂಹಲ ಕೆರಳಿಸುವ ವಿಷಯಗಳಿವೆ! ಇಲ್ಲೋಂದು ಅದರ ಸಣ್ಣ ಝಲಕ್ಕಿದೆ, ಅದೇ ಪೆರಿಗ್ರೇನ್ ಫಾಲ್ಕಂನ್ peregrine falcon (ದೊಡ್ಡಚಾಣ)

ಇದೊಂದು ಸಾಮಾನ್ಯ ಹಕ್ಕಿಯಲ್ಲ, ಕಾಣಸಿಗುವುದೇ ಕಷ್ಟ. ನಮ್ಮಲ್ಲಿಗೆ ಬರುವ ಚಳಿಗಾಲದ ವಲಸಿಗ ಅಥಿತಿ. ಇದರಲ್ಲೇನಿದೆ ಅಂಥ ವಿಷೇಶ ? ಮೈ ರೋಮಾಂಚನಮಾಡುವ ವಿಚಾರ ಇದೆ! ಇದೊಂದು ಪ್ರಾಣಿ ಪ್ರಪಂಚದ ಫೈಟರ್ ಜೆಟ್ (fighter jet) ಅಥವ ಎರ್ ಟು ಎರ್ ಕ್ಷಿಪಣಿಯೆಂದರೆ ತಪ್ಪಿಲ್ಲ. ದೊಡ್ಡ ಚಾಣ, ಪಕ್ಷಿ ಹಾಗು ಪ್ರಾಣಿ ಪ್ರಪಂಚದ ಅತ್ಯಂತ ವೇಗವಾಗಿ ಕ್ರಮಿಸಬಲ್ಲ ಜೀವಿ. ಹಾಗೆದ್ದರೆ ಇದರ ಗರಿಷ್ಟ ವೇಗ ಎಷ್ಟಂತೀರ? ಬರೊಬ್ಬರಿ 380 ಕಿಲೋಮೀಟರ್ ಗಂಟೆಗೆ ಹಾರಬಲ್ಲ ಸಾಮರ್ಥ್ಯ ದಾಖಲಾಗಿದೆ. ತನ್ನ ಬೇಟೆಯನ್ನು ಗಾಳಿಯಲ್ಲೇ ಆಕ್ರಮಣ ಮಾಡಿ (ಗಂಟೆಗೆ ಸುಮಾರು 320 ಕಿಲೋಮೀಟರ್ ವೇಗವಾಗಿ ಡೈವ್ ಹಾಕಿ ತನ್ನ ಬಲವಾದ ಕಾಲು ಮತ್ತು ಉಗುರು ಪಂಜದಿಂದ ಹೊಡೆದುರುಳಿಸಿ), ಬೇಟೆ ಕೆಳಗೆ ಬಿದ್ದನಂತರ ಸಿಗಿದು ತಿನ್ನುತ್ತದೆ.



ಮತ್ತೊಂದು ಗಮನಿಸಬೇಕಾದ ವಿಶೇಷ ಇದೆ, ದೊಡ್ಡ ಚಾಣದ ಮೂಗು ! ಅಷ್ಟೊಂದು ವೇಗದಲ್ಲಿ ಹಾರಬೇಕಾದರೆ ಉಸಿರಾಟ? ನಾವು ಮೋಟಾರು ಬೈಕ್ನಲ್ಲಿ ಗಂಟೆಗೆ 80-90 ಕಿಲೋಮಿಟರ್ ವೇಗದಲ್ಲಿ ಹೋಗುವಾಗ ಉಸಿರಾಡಲು ಕಷ್ಟ ಅಲ್ವ? ತೀವ್ರವಾದ ವಾಯುವೇಗದಿಂದ ಉಸಿರಾಡಲು ತೊಂದರೆಯಾಗಿಬಿಡುತ್ತದೆ. ಚಾಣದ ಮೂಗಿನ ಮೂಳೆಗಳು ಶಂಕುವಿನಾಕಾರದ ರಚನೆ ನೀಡಿ ಗಾಳಿಯವೇಗವನ್ನು ತಗ್ಗಿಸಿ ಉಸಿರಾಡುವ ಹಾಗೆ ರೂಪುಗೊಂಡಿರುತ್ತದೆ.

ದೊಡ್ಡ ಚಾಣಕ್ಕೂ, ಕೆಲವು ಸೂಪರ್ಸಾನಿಕ್ ಫೈಟರ್ ಜೆಟ್ಗೂ ( ಉದಾ: ಅಮೇರಿಕಾದ ಎಫ್ 22 ರಾಪ್ಟರ್) ನಿಕಟ ಸಂಭಂದ ಇದೆ, ಇಂಜಿನಿಯರ್ಗಳು ದೊಡ್ಡ ಚಾಣದ ಮೂಗಿನ ಅಧ್ಯಾಯನ ಮಾಡಿ, ಕೆಲವು ಪೈಟರ್ ಜೆಟ್ಗಳ ಎರ್ ಇನ್ಟೇಕ್ (air intake system) ವಿನ್ಯಾಸಮಾಡಿರುವುದುಂಟು. ಇಲ್ಲವಾದಲ್ಲಿ ಸೂಪರ್ಸಾನಿಕ್ ವೇಗದಲ್ಲಿ ಹಾರುವಾಗ ಅತಿಯಾದ ವಾಯುವೇಗದಿಂದ ಜೆಟ್ ಇಂಜಿನ್ ಛೊಕ್ ಆಗುವ ಸಮಸ್ಯೆ ಎದುರಾಗುತ್ತಿತ್ತು.

ಈಗಲೂ ಚಾಣಗಳ ಮೇಲೆ ಸಂಶೋಧನೆಗಳು ನಡೆಯುತ್ತಿದೆ.
---------

Saturday 20 February 2016

Eurasian Sparrow Hawk


Indian Spectacled Cobra (ನಾಗರಹಾವು), Feb 2016

ಭುಸ್ssssss

ನಾಗರಹಾವು ಕಂಡರೆ ಸಾಕು ಹಾಗೆ ಗೊತ್ತಿಲ್ಲದೆ ಎದೆ ಬಡಿತ ಹಾಗು BP ಜಾಸ್ತಿ ಆಗಿದ ಅನುಭವ ಇದ್ಯಾ? ಅದಿರಲಿ ನಾಗರಹಾವು ಅಂದ್ರೆ ಸಾಕು, ನಾವು ಒಮ್ಮೆ ಅದನ್ನ ನೋಡಿದ್ದೀವೋ ಇಲ್ಲವೊ, ಅದು ನಾಗರಹಾವೋ ಅಲ್ಲವೊ ಭಯವಂತು ಅನುಭವಿಸುವ ಹಾಗೆ ನಮ್ಮ ಮನಸ್ಸುಗಳಲ್ಲಿ ಹಾವುಗಳೆಂದರೆ Terror. ಹಾವು ಅಂದರೆ ವಿಷ, ಕಡಿತ ಭಯದ ಭಾವನೆ ಆಳವಾಗಿ ನಮ್ಮಲ್ಲಿ ಬೇರೂರಿದೆ.
ಹೌದು ಹಾವಿನ ವಿಷ ಮಾರಣಾಂತಿಕ, ಆದರೆ ಎಲ್ಲಾ ಹಾವುಗಳು ವಿಷ ಸರ್ಪಗಳಲ್ಲ. ಕಂಡಲ್ಲಿ ಹಾವುಗಳನ್ನು ಹೊಡೆದು ಸಾಯಿಸುವ ಅವಶ್ಯಕತೆ ಕೂಡ ಇಲ್ಲ. ನಮ್ಮ ಭಾರತದಲ್ಲಿ "Big Four" ಫ್ಯಾಮಿಲಿ ಇದೆ, ಈ ಹಾವುಗಳ ಕಡಿತದಿಂದ ಗರಿಷ್ಠ ಅಪಾಯಗಳಾಗಿವೆ, ಅದು - ನಾಗರಹಾವು (Cobra), ಕೊಳಕು ಮಂಡಲ (Russel's Viper), ಕಟ್ಟಿಗೆ ಹಾವು (Common Krait) ಮತ್ತು ಗರಗಸ ಮಂಡಲ ಹಾವು (Saw scaled viper). ಹಾವುಗಳು ಪ್ರಕೃತಿ ಸಮತೋಲನ ಕಾಪಾಡುವಲ್ಲಿ ವಿಶಿಷ್ಠ ಸ್ಥಾನ ಪಡೆದಿದೆ.
------------
ಪಾಣಿಗಳು ಮನುಷ್ಯನ ಮೇಲೆರಗಿವೆಯೆಂದರೆ ಅದಕ್ಕೆ ಸಾಮಾನ್ಯ ನಾಲ್ಕು ಕಾರಣ ಹೊರತುಪಡಿಸಿ ಬೇರೆ ಕಾರಣಗಳಾಗಲಿ ಉದ್ದೇಶಪೂರಕವಾಗಾಗಲಿ, ಯಾವುದೋ ಹನ್ನೆರಡು ವರುಷದ ಸೇಡಿಗಾಗಲೀ ದಾಳಿಮಾಡುವುದಿಲ್ಲ. ಅಥವ ಬೇರೆ ಕಾರಣಗಳಿದ್ದರೆ ಅದರ ಸಾಧ್ಯತೆ ಅತಿ ವಿರಳದಲ್ಲಿ ವಿರಳ !
1. ಸುರಕ್ಷತೆ - ತಿಳೀದೆ ತೀರ ಸಮೀಪ ಬಂದಾದ (Close encounter) ಗಾಬರಿಯಿಂದ ದಾಳಿಮಾಡುವ ಸಾಧ್ಯತೆ
2. ಜೋತೆಯಲ್ಲಿ ಮರಿಗಳಿದ್ದರೆ ಅದರ ಸುರಕ್ಷತೆಗೆ ದಾಳಿಮಾಡುವ ಸಾಧ್ಯತೆ.
3. ಕೆಲವೊಮ್ಮೆ ಅದರ ಆಹಾರಕ್ಕೆ ನಾವು ಪೈಪೋಟಿಯೆನ್ನಿಸಿದರೆ. ಕೆಲವು ಮಾಂಸಹಾರಿ ಪ್ರಾಣಿ ಸಹಜ ಬೇಟೆಯಾಡುವ ಸಾಮರ್ತ್ಯ ಕಳೆದುಕೋಂಡು ನರಭಕ್ಷತವಾಗಿದ್ದಲ್ಲಿ.
4. ವಿನಾಕಾರಣ ಅದಕ್ಕೆ ತೊಂದರೆಕೊಟ್ಟಲ್ಲಿ ದಾಳಿ ಮಾಡುವ ಸಾಧ್ಯತೆ.

ಪ್ರಾಣಿಗಳ ಸಿದ್ಧಾಂತ: ಮಾನವನ್ನನ್ನು ಕಂಡರೆ ಮೊದಲು ಕಾಲಿಗೆ ಬುದ್ದಿ ಹೇಳು!

ಈ ಹಾವುಕೂಡ ಸುಮಾರು ಇಪ್ಪತ್ತು ನಿಮಿಷದ ಬಳಿಕ ನನ್ನನ್ನು ಕಂಡು ಸದ್ದಿಲ್ಲದೆ, ಹೆಡೆಯೆತ್ತದೆ ಮೊದಲು ಜಾಗ ಖಾಲಿ ಮಾಡಿತು!


Thursday 11 February 2016

White stork

White Stork, ಬಿಳಿ ಕೊಕ್ಕರೆ 07.02.2016, ಹೊಸಕೋಟೆ

ಹಕ್ಕಿಗಳ ವಲಸೆ ಪ್ರಕೃತಿಯ ವಿಸ್ಮಯಗಳಲ್ಲಿ ಒಂದು, ನಮಗಂತು GPS ಇಲ್ಲ್ದೆ ಪಕ್ಕದ ಊರಿಗೆ ಹೋಗಿಬರಲು ಕಸ್ಟ. ಆದರೆ ಈ ಹಕ್ಕಿಗಳು ಸಾವಿರಾರು ಮೈಲುಗಳು ಕ್ರಮಿಸಿ ನಿರ್ದಿಷ್ಟ ಜಾಗಕ್ಕೆ ತಲುಪಿ ಕೆಲವು ದಿನ, ತಿಂಗಳುಗಳು ಕಳೆದು ಪುನಃ ಹಿಂತಿರುಗಿ ಬಂದ ಜಾಗ ತಲುಪುತ್ತದೆ! ಪ್ರತಿ ವರ್ಷ ಹಕ್ಕಿಗಳು ವಲಸೆ ಹೋಗುವುದುಂಟು, ಮುಖ್ಯ ಕಾರಣ ಶೀತಪ್ರದೇಶದ ಅತೀವ ಚಳಿ, ಚಳಿಕಾರಣ ಬೇಟೆ ಮತ್ತು ಆಹಾರದ ಕೊರತೆ ಹಾಗು ಸಂತಾನೋತ್ಪತ್ತಿ. ಮಾಡು ಇಲ್ಲವೆ ಮಡಿ, ವಲಸೆ ಹೋಗದೆ ಬೇರೆ ದಾರಿಯೇ ಇಲ್ಲ ಈನಮ್ಮ ಸ್ನೇಹಿತರಿಗೆ. ತಮ್ಮ ಪ್ರಾಣ ಪಣಕ್ಕಿಟ್ಟು ಸಾವಿರಾರು ಮೈಲು ವಲಸೆ ಬರುವ ಈ ಅತಿಥಿಗಳಿಗೆ ತೊಂದರೆ ಕೊಡದೆ ಇದ್ದರೆ ನಮ್ಮಿಂದಾಗುವ ಮಹಾಉಪಯೋಗ.
---------

ಬಿಳಿ ಕೊಕ್ಕರೆ, ಸತತ ನಾಲ್ಕನೇ ಸಾಲು ನಾ ಕಂಡಂತೆ ಹೊಸಕೋಟೆ ಕೆರೆಗೆ ಬರುತ್ತಿರುವುದು. ಸುಮಾರು ಫೆಬ್ರವರಿ ಮೊದಲವಾರ ಬಂದಿಳಿಯುತ್ತದೆ. ಬಿಳಿಕೊಕ್ಕರೆಗಳು ನಮಗೆ ಕೊಂಚ ಅಪರೂಪದ ಹಕ್ಕಿಗಳು. ಬಹುಶಃ ಬೆಂಗಳೂರು ಸುತ್ತಮುತ್ತ ಹೊಸಕೋಟೆ ಕೆರೆಯಲ್ಲಿ ಮಾತ್ರ ಫೆಬ್ರವರಿ ತಿಂಗಳಲ್ಲಿ ಕಾಣಬಹುದು. ಇಲ್ಲಿ ಸಾಮಾನ್ಯವಾಗಿ ಸಿಗುವ ಬಣ್ಣದ ಕೊಕ್ಕರೆಗಿಂತ ಒಂದು ಸೈಜು ದೊಡ್ಡದು. ಬಿಳಿ ಕೊಕ್ಕರೆ ದಕ್ಷಿಣ ಭಾರತಕ್ಕೆ ದೂರದ ಮಧ್ಯ ಏಶಿಯ ಪ್ರಾಂತ್ಯ ಅಥವ ಯೂರೋಪ್ನಿಂದ ವಲಸೆ ಬಂದು ಹೋಗುತ್ತದೆ. ಯಾವ GPS ಯಾವ air traffic control, ಯಾವ ವಿಸ ಪಾಸ್ಪೋರ್ಟ್? ಎಲ್ಲಾ ದೇಶವಿದೇಶ ಪೂರ್ತಿ ಭೂಮಿ ಇದರದ್ದೆ!!

Monday 8 February 2016

Hoskote lake, ಹೊಸಕೋಟೆ ಕೆರೆ, 06.02.2016



1991ರಲ್ಲಿ ಕೊನೆಬಾರಿ ಕೋಡಿ(overflow) ಹೋದದ್ದು. ಅನಂತರ 1999ರಲ್ಲಿ ಸುಮಾರು 5-6ಅಡಿ ಕಡಿಮೆ ಪೂರ್ತಿ ಕೆರೆತುಂಬಲು. ಎರಡು ದಶಕಗಳೇ ಕಳೆಯಿತು ನೀರೇ ಇಲ್ಲ. ಇದು ಅಂತಿಂತ ಕೆರೆಯಲ್ಲ, ಸುಮಾರು 3200 ಎಕರೆ, ಹೆಚ್ಚು ಕಡಿಮೆ ಹತ್ತು ಕಿಲೋಮಿಟರ್ ಉದ್ದ ಮತ್ತು 2-3 ಕಿಲೋಮೀಟರ್ ಅಗಲ, ಅಬ್ಬ ಇದರ ಹೊಟ್ಟೆ ತುಂಬಬೇಕಾದರೆ ಭಾರಿ ಮಳೆಯೇ ಬೇಕು!

ಸುತ್ತಮುತ್ತಲ ಹಲವಾರು ಹಳ್ಳಿಗಳ ಹಾಗು ಹೊಸಕೋಟೆ ಪಟ್ಟಣದ ಜೀವನಾಡಿ. ಬೆಂಗಳೂರು ಸುತ್ತಮುತ್ತಲಿನ ಬಹುಶಃ ದೊಡ್ಡಕೆರೆ ಇದೇ ಇರಬೇಕು. ಕರ್ನಾಟಕ ರಾಜ್ಯದ ಮೊದಲ ಹತ್ತು ವಿಷೇಶ ಕೆರೆಗಳ ಪೈಕಿ ಇದೂ ಒಂದು.

ಸುಮಾರು 186 ಪ್ರಭೇದದ ಸಾವಿರಾರು ಪಕ್ಷಿಗಳ ಆಶ್ರಯ. ಲೆಕ್ಕವಿಲ್ಲದಷ್ಟು ಸರಿಸೃಪ, ಕ್ರಿಮಿ ಕೀಟಗಳ ಮನೆಯಿದು. ಆಳಿವಿನಂಚಿನಲ್ಲಿಗರುವ (endangered) ಹಕ್ಕಿಗಳು, ದೇಶ ವಿದೇಶದಿಂದ ವಲಸೆ ಬಂದ ಹಕ್ಕಿ ಜೊತೆಗೆ ಸ್ಥಳವಂದಿಗ ಹಕ್ಕಿಗಳಿಗೆ ಪಾಲನೆ ಪೋಶಣೆ ನೀಡಿ ಸಾಕಿ ಸಲಹುತ್ತಿದೆ

ನನ್ನ ಹುಟ್ಟೂರು ಹೊಸಕೊಟೆಯಾದ ಕಾರಣ ನನ್ನ ಬಾಲ್ಯಕ್ಕೂ ಈ ಕೆರೆಗೂ ತುಂಬಾ ನಂಟು! ರಜಾಬಂತೆಂದರೆ ಕೆರೆಯಲ್ಲಿ ಕ್ರಿಕೆಟ್, ಹರಟೆ, ಸೈಕಲ್ ಸವಾರಿ, ಇತ್ಯಾದಿ. ಪರೀಕ್ಷೆ ಬಂತೆಂದರೆ ಕೆರೆ ಕಟ್ಟೆಯ ಪ್ರಶಾಂತ ವಾತವರ್ಣದಲ್ಲಿ ಓದು. ಮನೆಯಲ್ಲಿ ಬಾರದ ಏಕಾಗ್ರತೆ ಇಲ್ಲಿ ಬರುತ್ತಿತ್ತು. ಈಗಂತು ಊರಿಗೆ ಹೋದಾಗಲೆಲ್ಲಾ ಕೆರೆಗೆ 4-5 ತಾಸುಗಳ ಒಂದು visit ಗ್ಯಾರೆಂಟಿ, ಕಾರಣ ಅಲ್ಲಿರುವ ಹಕ್ಕಿಗಳು.

Wednesday 3 February 2016

Indian Roller

Indian Roller,
ಭಾನುವಾರ ಸಂಜೆ, ಸುಮಾರು 4:45 ಹಾಗೆ ಖಗಗಳನ್ನು ಹುಡುಕುತ್ತಾ ಒಂದು ಕೃಷಿ ಭೂಮಿಯತ್ತ ಬಂದೆ. ಸೂರ್ಯ ತಾನು ತಂಪಾಗಿ ಮುಳುಗಲು ಸಜ್ಜಾಗುತ್ತಿದ್ದ. ಕಿರಣ ತೀಕ್ಷ್ಣತೆ ಕಡಿಮೆಯಾಗೆ ಸಮತಲದಲ್ಲಿದ್ದ ಬೆಳಕಿಗೂ, ನಾನ್ನ ಕಣ್ಣಿಗೆ ವರ್ಣಮಯ ಹಕ್ಕಿ ಬೀಳಲೂ?

ಪದೇ ಪದೇ ನೀಲಕಂಠ ಪಕ್ಷಿ ಒಂದು ಕಲ್ಲಿನ ಮೇಲಿಂದ ಹಾರಿ ಮರದ ಮೇಲೆ ಕುಳಿತು ಮತ್ತೆ ಅದೇ ಕಲ್ಲಿಗೆ ಜಿಗಿಯುತ್ತಿದ್ದುದ್ದನ್ನು ಗಮನಿಸಿದೆ. ಇಲ್ಲೇ ಸಲ್ಪ ದೂರದಲ್ಲಿ ಅಲುಗಾಡದೆ ಸದ್ದಿಲ್ಲದೆ ಕಾದು ಕುಳಿತರೆ, ಗರಿಬಿಚ್ಚಿದ ನೀಲಿ ಬಣ್ಣಗಳ ಓಕುಳಿ ಗ್ಯಾರೆಂಟಿ. ಕಣ್ಣಿಗೂ ತಂಪು ಮನಸ್ಸಿಗೂ ಉಲ್ಲಾಸ.

ಎಲ್ಲೋ ಏನೋ ಪೆಟ್ಟು ಮಾಡಿಕೊಂಡು ಮೇಲಿನ ಕೊಕ್ಕನ್ನು ಮುರಿದುಕೊಂಡಿದೆ ಅಲ್ವಾ?

ನಿಮಗಿದು ಗೊತ್ತೆ: ನೀಲಕಂಠ ಪಕ್ಷಿ ನಮ್ಮ ರಾಜ್ಯ ಪಕ್ಷಿ! ನಮ್ಮ ಸುತ್ತ ಇರುತ್ತದೆ, ಕೃಷಿ ಪ್ರದೇಶ, ಬಯಲು ಜಾಗಗಳಲ್ಲೆಲ್ಲಾ ಕಾಣಸಿಗುತ್ತದೆ. ಒಮ್ಮೆ ನೋಡಬಹುದಲ್ಲ? ಮಕ್ಕಳಿಗೂ ತೋರಿಸಬಹುದಲ್ವಾ?